top of page
ಖಾಲಿ ರಸ್ತೆಗಳು
ಹತ್ತಾರು ಬಾರಿ ಗಾಯಗೊಂಡರೂ ಮಳೆಗೆ ಮುಚ್ಚಿ ಹೋದರೂ ಡಾಂಬರು ಬಣ್ಣಕ್ಕೆ ನಿಲ್ಲುತ್ತಿದೆ ನಿನ್ನ ಜೊತೆಯಲ್ಲೇ ಮತ್ತೆ ಓಡುತ್ತಿದೆ ಬಿದ್ದ ಗಾಯ,ಲೆಕ್ಕವಿಲ್ಲದಷ್ಟು ಸಾವು ನೋವಿನ ಆಘಾತ ಕಂಡರೂ ನನ್ನ ಪಕ್ಕ ಕುಳಿತು ನಿತ್ಯ ಹೂ ಮಾರುವ ಬಡ ಅಜ್ಜಿಯ ಪ್ರಾಮಾಣಿಕ ಬದುಕು ಕಂಡು ನಿನ್ನ ಜೊತೆಯಲ್ಲೇ ಮತ್ತೆ ಓಡುತ್ತಿದೆ ಶ್ರೀಮಂತ ಹೀಲ್ಡ ಶೂಗಳು ಕಣ್ಣು ಕುಕ್ಕುವುದಕ್ಕಿಂತ ಹರಿದ ಚಪ್ಪಲಿಯೊಳಗೆ ಹೊಕ್ಕಿದ ಗಾಜಿನ ಚೂರಿನ ಆ ಪಾದಗಳ ಕಂಡು ಮರುಗುತ್ತಾ ನಿನ್ನ ಜೊತೆಯಲ್ಲೇ ಮತ್ತೆ ಓಡುತ್ತಿದೆ ಮದುವೆಯ ದಿಬ್ಬಣಕ್ಕೆ ಮರಣದ ಯಾತ್ರೆಗೆ ಎರಡಕ್ಕೂ ಸಾಕ್ಷಿಯಾಗಿದ್ದೇನೆ ನಡುವಿನ ಆಟದಲ್ಲಿ ಪ್ರೇಕ್ಷಕನಂತೆ ನಿನ್ನ ಜೊತೆಯಲ್ಲಿ ಮತ್ತೆ ಓಡುತ್ತಿದೆ ಈಗ ಕಾಣೆಯಾದ ನಿನ್ನ ಹೆಜ್ಜೆಗಳು ಹುಡುಕುವಾಗ ಚಿತೆಗಳ ಉರಿ ನೋಡಿ ಬೆವರಿದ್ದೇನೆ. ಓಡಲಾಗದೆ ರಾತ್ರಿಯಂತೆ ಹಗಲು ಸಹ ನನ್ನ ಜೊತೆ ನಿಶಬ್ಧದಲ್ಲಿ ವಿಶ್ರಾಂತಿಸುತ್ತಿದೆ ಎಂ.ಜಿ.ತಿಲೋತ್ತಮೆ ಭಟ್ಕಳ
bottom of page