top of page

ಕ್ಷಮಿಸಲಾಗದು

ಹೇ ನಿಷ್ಕರುಣಿ ನಿರ್ಗುಣಿ ಕರುಣೆಯಿಲ್ಲದ ನಿರ್ದಯಿ ಸಿಂಹಿಣಿ ಸಾವು ಬರಲೆಂದು ದಿನವೂ ಹಂಬಲಿಸುವವರ ಮೇಲಿಲ್ಲ ನಿನ್ನ ಕರುಣ ಇನ್ನೂ ಬಾಳಿ ಬದುಕಬೇಕಾದ ಮುಗ್ಧ ಜೀವಗಳ ಸಂಚು ಹಾಕಿ ಪ್ರಾಣ ಹೀರಿ ಹೊತ್ತೊಯ್ಯುವ ನಿನ್ನ ಭಯಾನಕ ಪರಿ ಸಹಿಸಲಾಗದು ನಿನ್ನ ಕ್ಷಮಿಸಲಾಗದು ಯಾಕೆ ನಿನಗೆ ಯಾರ ಯಾರ ಮೇಲೊ ಕಾಕ ದೃಷ್ಟಿ..? ಒಂದು ಸಣ್ಣ ಸುಳಿವೂ ನೀಡದೆ ಕಸಿದುಕೊಳ್ಳುವೆಯಲ್ಲ ಮೊಲೆಯನುಂಬ ಕಂದಮ್ಮಗಳ ತಾಯ್ಗಳ ಇನ್ನೂ ಬಾಳಿ ಬದುಕಿ ಎಲ್ಲರಿಗೂ ಬೇಕಾದವರ ಜೀವಕ್ಕೆ ಜೀವವಾಗಿ ಅರಿತು ಬೆರೆತ ಸತಿ ಪತಿಗಳಲ್ಲೊಬ್ಬರ ಇಳಿ ವಯದಲ್ಲಿ ಊರುಗೋಲಿನಂತೆ ಆಸರೆಯಾಗಿ ನಿಂತವರ ಪಾಪ ಪುಣ್ಯ ಎಲ್ಲ ಕಂತೆ ಪಾಪಿಗಳಿಗಲ್ಲಿ ನಿಶ್ಚಿಂತೆ ಮುಗ್ಧ ಮಾನವಂತರಿಲ್ಲಿ ನಿನ್ನ ತೋಳ ತೆಕ್ಕೆಯಲ್ಲಿ ನಿನಗಿಲ್ಲ ಯಾರ ಮೇಲೂ ದಯೆ, ಪ್ರೀತಿ, ಕರುಣ ನಿನ್ನ ಹೆಸರೆ ಅಲ್ಲವೆ ಮರಣ ನಿನಗೆ ಎಳೆದೊಯ್ಯಲು ಕಾರಣ ಬೇಕೆಂದಿಲ್ಲ ಬೇಕು ಒಂದು ನೆಪ ಇನ್ನು ಸಾಕು ನಿಲಿಸು ನಿನ್ನ ಕರುಣೆಯಿಲ್ಲದ ಕೃತ್ಯವ ಕೃಪೆ ಮಾಡಿ ದಯೆ ತೋರು ಉಳಿಸು ಎಳೆಯ ಜೀವವ. ಸುಧಾ ಹಡಿನಬಾಳ

ಕ್ಷಮಿಸಲಾಗದು
bottom of page