top of page

ಕ಼ಣಗಣನೆ

ಒಂದು.....ಎರಡು......ಮೂರು ಹೀಗೆ ಸುರುವಾಗಿದೆ ಕ಼ಣಗಣನೆ. ಹಚ್ಚಿಟ್ಟ ಹಣತೆಯ ಬೆಳಕು ಕೀ಼ಣವಾಗಿದೆ ಈಗಾಗಲೆ. ಸಮಯ ಬಹಳಿಲ್ಲ ಇನ್ನು. ಎಣ್ಣೆತೀರಿ,ಬತ್ತಿಸುಟ್ಟು ಕರಕಲು ಖಮಟುವಾಸನೆ ಒಳಗೆಲ್ಲ- ತುಂಬಿ ಉಸಿರುಗಟ್ಟಿದ ಅನುಭವ. ಸಮಯ ಬಹಳಿಲ್ಲ ಇನ್ನು. ಕಣ್ಣೆದುರು...ಮಬ್ಬು....ಮಬ್ಬು ಜೀವ,ಜೀವನ ಚಿತ್ರಗಳೆಲ್ಲ ಅಸ್ಪಷ್ಟ, ಚಿತ್ತದ ಒಳಗೂ.....ಹೊರಗೂ. ಸಮಯ ಬಹಳಿಲ್ಲ ಇನ್ನು. ದಡಸೇರಗೊಡದೆ ಕಾವಲು ಅಲೆ, ಹಟಕ್ಕೆ ಬಿದ್ದಂತೆ ನೂಕಿ....ನೂಕಿ, ತೂತು ದೋಣಿ, ಕಣ್ಣಳತೆಗೂ ದೂರ- ಕಡಲ ಮಧ್ಯದಲ್ಲಿ ಅಸ್ಪಷ್ಟ. ಸಮಯ ಬಹಳಿಲ್ಲ ಇನ್ನು. ಆಲಯದೊಳಗೆ ಬಂಧಿ, ಬಯಲ ಬಣ್ಣದ ಹಕ್ಕಿ ಚೀತ್ಕರಿಸಿ ಚಡಪಡಿಸುತ್ತಿದೆ ಒಂದೇ ಸವನೆ. ಸಮಯ ಬಹಳಿಲ್ಲ ಇನ್ನು. ತೊಟ್ಟ ವೇಷಭೂಷಣ,ಮುಖವಾಡ ಎಲ್ಲ ಕಳಚಿಟ್ಟು ಒಮ್ಮೆಗೇ.. ಬೆತ್ತಲಾಗಿ ನಿರುಮ್ಮಳವಾದಂತೆ...! ನಡೆದೂ..ನಡೆದೂ ಸವೆಸಿದ ದಾರಿ- ಯ ಕೊನೆ ಹತ್ತಿರ....ಹತ್ತಿರವಾದಂತೆ...! ಇನ್ನಾದರೂ ಸಾಧ್ಯವಾಗದ್ದನ್ನು ಸಾಧ್ಯವಾಗಿಸಿ,ಅಂದುಕೊಂಡದ್ದನ್ನು ಆಗಮಾಡಿಸಿ,ವಿರಮಿಸಬೇಕು. ಎದುರು ಇದ್ದಿರಬಹುದು, ಕಾಲಾತೀತಕ್ಕೊಂದು ಸಣ್ಣ ಏಣಿ, ಆಮೇಲೆ..ಆಮೇಲೆ...... ಗಡಿಯಾರ ಸ್ತಬ್ಧ. --ಅಬ್ಳಿ,ಹೆಗಡೆ

ಕ಼ಣಗಣನೆ
bottom of page