top of page

ಕವಿತೆ ಹುಟ್ಟುವಾಗ

ಸೂರ್ಯ,ಸಾಯುತ್ತಿದ್ದ. ಕಾಯುವಹಾಗಿಲ್ಲ, ತಿರುಗಿ ಹುಟ್ಟುವವರೆಗೆ. ಕತ್ತಲು ಕಳೆಯುವವರೆಗೆ. ಪ್ರಸವವೇದನೆ ತಾಯಿಗೆ-- ಭಯ,ಆತಂಕ,ಸಂತಸ ಒಟ್ಟೊಟ್ಟಿಗೆ,ಹೊಟ್ಟೆಯೊಳಗೆ ಕೈ,ಕಾಲಾಡಿಸುವ ಪುಟ್ಟ- ಕವಿತೆ,ದೈತ್ಯ ಪ್ರಸವವಾದರೆ ‌ ಅಳಿವು,ಉಳಿವಿನ ಪ್ರಶ್ನೆ. ತಂದೆಯಾರೊ ಗೊತ್ತಿಲ್ಲ. ವ್ಯಭಿಚಾರಿಣಿ ಪಟ್ಟ ಗಟ್ಟಿ ಆಗುವ ಆತಂಕ, ಒಳಗೊಳಗೆ,ಅಸಾಧ್ಯ- ನೋವಿನಲ್ಲೂ ತಾಯ್ತನ- ದ ಖುಷಿ,ಅಪ್ಯಾಯಮಾನ. ಸುಖ ಪ್ರಸವ ಕತ್ತಲಲ್ಲಿ, ಕಣ್ತೆರೆಯಬೇಕು- ಮುದ್ದು ಕವಿತೆ,ಹುಟ್ಟುವ ಹೊಸ ಬೆಳಕಲ್ಲಿ. ತನ್ನ,ಪುಟ್ಟ,ಪಿಳಿ,ಪಿಳಿ ಕಣ್ಣುಗಳಿಂದ ನೋಡಬೇಕು, ನಿಚ್ಚಳ ಬೆಳಕಲ್ಲಿ, ಹೊಚ್ಚ ಹೊಸ ಜಗತ್ತನ್ನು. ಮುಗಿಲೆತ್ತರಕ್ಕೆ ಎದ್ದು ನಿಲ್ಲಬೇಕು ನೀಳಕಾಯಳಾಗಿ. ತಾಯ್ತನದ ಸಾರ್ಥಕತೆ ಇರುವದೇ ಇಲ್ಲಿ. ಭಯ,ಆತಂಕ,ನೋವು, ಸಂತಸ ಎಲ್ಲದರ ಸಾರ್ಥಕತೆಯೂ ಇಲ್ಲೆ. ಕತ್ತಲಲ್ಲಿ ಹುಟ್ಟಿದ ಕವಿತೆಯಲ್ಲಿ. -ಅಬ್ಳಿ,ಹೆಗಡೆ.

ಕವಿತೆ ಹುಟ್ಟುವಾಗ
bottom of page