top of page

ಕಳೆವ ದಿನಗಳು

*ಕಳೆವ ದಿನಗಳು* ದಿನಗಳು ಕಳೆಯುತ್ತವೆ ಹೀಗೇ ಎಂದು ಹೇಳಲಾಗದ ಹಾಗೆ. ಕನಸುಗಳ ಹೊತ್ತವರ,ಹಗಲು-- --ಗನಸುಗಳ ಕಾಂಬವರ ಕಂಡದ್ದೆಲ್ಲಾ ನನಸು ಮಾಡಿ-- --ಕೊಂಡವರ ತಲೆಯೊಳಗೆ ಮತ್ತೆ ಹೊಸ ಹೊಂಗನಸುಗಳ ಬೀಜ ಬಿತ್ತಿ, ದಿನಗಳು ಕಳೆಯುತ್ತವೆ...... ಬಳ್ಳಿಯಂತೇ ದಿನಗಳು! ಇರುವಾಗ,ಕನಸಿನ-- ದಂಡೆ ನೇಯುವರು ಮಾಲೆ ಕಟ್ಟುವರು ಅದೂ ಆಗದಿರೆ ಕನಸ-- --ಬಿಡಿ ಹೂವ ಮುಡಿಯುವರು...... ಹೀಗೇ ಇರುವರ ಉಳಿಸಿ ಅಳಿಸಿ ನಗಿಸುತ್ತ, ದಿನಗಳು ಕಳೆಯುತ್ತವೆ, ಹೀಗೇ ಎಂದು ಹೇಳಲಾಗದೆ ಹಾಗೆ, ದಿನಗಳು............ *ಗಣಪತಿ ಗೌಡ, ಹೊನ್ನಳ್ಳಿ* *ಅಂಕೋಲಾ* ಆಲೋಚನೆ.ಕಾಂ ಬಳಗದ ಕ್ರಿಯಾಶೀಲ ಉಪನ್ಯಾಸಕ ಸೃಜನಶೀಲ ಕವಿ ಗಣಪತಿ ಗೌಡ ಹೊನ್ನಳ್ಳಿ ಅಂಕೋಲಾ ಅವರ "ಕಳೆವ ದಿನಗಳು" ಕವನ ನಿಮ್ಮ ಸಹ ಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

ಕಳೆವ ದಿನಗಳು
bottom of page