top of page

ಕಣ್ಣು

1. ಕ್ಷಮತೆಯ ಕುಂದುವಿಕೆ ಬರುವುದು ಚಾಳೀಸು! ಕನ್ನಡಕವ ತಗುಲಿಸಿದರೆ ದೃಷ್ಟಿಯು ಸಲೀಸು!! 2. ಕಣ್ಣಳತೆಯ ದೂರ..... ಕಂಡರೂ ಪ್ರಮಾಣಿಸಿ ನೋಡು ಇತ್ಯಾದಿ ಗಾದೆ!! ಚೇಷ್ಟೆಯ ಕೈ ಮೇಲಾಗಿ ಕಣ್ಣು ಹೊಡೆದರೆ ಬೀಳುವುದು ಒದೆ!! 3. ಕಮಂಗಿ ಆಗ ಬಹುದು ಕಣ್ಣಿಂದಲೇ!! ಪ್ರೇಮಾನುರಾಗ ಕೂಡ ಅದರಿಂದಲೇ!! ನೇತ್ರದಾನ **** ಸೃಷ್ಟಿಯ ಚರಾಚರವ ಕಣ್ತುಂಬಿಕೊಂಡು! ದೃಷ್ಟಿಯ ರಚನೆಗೆ ವಿಸ್ಮಯಗೊಂಡು!! ಆ ಭಗವಂತನಿಗೆ ಚಿರಋಣಿಯಾಗುತ! ಅಂಧರ ದುರಾದೃಷ್ಟಕ್ಕೆ ಮರುಗುತ! ಮರಣಿಸಿದ ಮೇಲೆ ಮಣ್ಣಾಗುವ ನಯನ! ವ್ಯರ್ಥವಾಗಿಸದೆ ಮಾಡೋಣ ನೇತ್ರಾದಾನ!! ಎನ್ನುವ ಮನೋಭಾವ ಎಲ್ಲರಲೂ ಬರಲಿ!! ಅಂಧರ ಬದುಕಲ್ಲಿ ಬೆಳಕನ್ನು ತರಲಿ!! ಸಾವಿತ್ರಿ ಶಾಸ್ತ್ರಿ, ಶಿರಸಿ

ಕಣ್ಣು

©Alochane.com 

bottom of page