top of page

ಒಮ್ಮೊಮ್ಮೆ

ಹಗಲ ಬೆಳಕ ಸುರಳೀತ ನಡೆಯಲ್ಲಿ     ಹೆಗಲೇರಿ ಕುಳಿತ ರಾತ್ರಿಯ ಕರಾಳ     ಕನಸಿನ ನೆನಪಲ್ಲೂ ಇದ್ದಕ್ಕಿದ್ದಂತೆ     ವರ್ಣನಾತೀತ ಹೊಳಪು ಒಮ್ಮೊಮ್ಮೆ...          ಇರಬಹುದೇನೋ,,ಗಿಡ,ಮರಗಳಿಗೂ          ಸಂಕಷ್ಟ,ನೋವು,ಬವಣೆ,ಹಸಿವು,ತ್ರಷೆ          ಆದರೂ ಮುಗಿಲೆತ್ತರ ಚಿಗುರಿ ಹೂ,          ಹಣ್ಣಲ್ಲಿ ಖುಷಿಯು ಕಣ್ತೆರೆವುದಲ್ಲ                                      ಒಮ್ಮೊಮ್ಮೆ....     ಹೊಯ್ದಾಡುವ ಪ್ರಕು಼ಬ್ಧ ಕಡಲಲ್ಲೂ     ಶಾಂತ,ಸುಂದರ,ಭೌವ್ಯ,ಗಂಭೀರತೆ     ಗೋಚರಿಸುವದಲ್ಲ ಒಮ್ಮೊಮ್ಮೆ....     ನೀರಿಲ್ಲದೇ ಭಣಗುಡುವ ಬೆಂಗಾಡೂ     ಹಸಿರ ಹೊದ್ದು ನಳನಳಿಸಿ ಕಣ್ತಣಿಸುವದಲ್ಲ                                      ಒಮ್ಮೊಮ್ಮೆ....         ಗಬ್ಬುನಾರುವ ಕೆಸರಲ್ಲೂ ಕಮಲ         ಅರಳಿ,ಪರಿಮಳ ಸೂಸಿ ಮನವ         ಮುದಗೊಳಿಸುವದಲ್ಲ..   .                                   ಒಮ್ಮೊಮ್ಮೆ...        ಬರೀ ಸಾವು ನೋವು ದುಃಖ ತುಂಬಿದ        ನರಕ ಸದ್ರಶ ಬದುಕಲ್ಲೂ ಸ್ವರ್ಗ ಸುಖ        ಹಣಕಿಕ್ಕುವದಲ್ಲ ಒಮ್ಮೊಮ್ಮೆ....        ಅರ್ಥವಾಗದ ಸತ್ಯವಾದರೂ ಇದು        ನೆಮ್ಮದಿಗೆ ಕಾರಣ ಒಮ್ಮೊಮ್ಮೆ...!!!     --ಅಬ್ಳಿ,ಹೆಗಡೆ.*

ಒಮ್ಮೊಮ್ಮೆ
bottom of page