top of page
ಒಂದು ಅಬ್ಸರ್ಡ್ ಕವನ
ಕಳೆದುಹೋಗಿದ್ದೇನೆ ನಾನು ಹುಡುಕಿಕೊಡಿ, ನಿನ್ನೆ ಇದ್ದ ನೆನಪು; ಬೆಳಿಗ್ಗೆಯೆಂದರೆ ಕಾಣಿಸಲಿಲ್ಲ ನನಗೆ ನಾನೇ... ಅತ್ತಿತ್ತ ತಡಕಾಡಿದೆ ಸುತ್ತಮುತ್ತ ಹುಡುಕಾಡಿದೆ ಊಂಹೂಂ.... ಎಲ್ಲಿಯೂ ಇದ್ದ ಅನುಭವ ಬರಲಿಲ್ಲ, ಅವರಿವರ ಕೇಳಬೇಕೆಂದರೆ ಒಬ್ಬರೂ ನನ್ನ ಮಾತು ಕೇಳಿಸಿಕೊಳ್ಳಲಿಲ್ಲ, ನೋಡಿದಂತೆನಿಸಿದರೂ ನೋಡಲಿಲ್ಲ; ಮೈ ಮುಟ್ಟಿ ನೋಡಿಕೊಂಡೆ ದೇಹಸ್ಪರ್ಶವಾದಂತೆನಿಸಲಿಲ್ಲ ಕನ್ನಡಿಯ ಮುಂದೆ ನಿಂತು ನನ್ನ ನಾ ನೋಡಬಯಸಿದೆ ಕನ್ನಡಿಯಲ್ಲಿಯೂ ನಾನಿರಲಿಲ್ಲ ಹಾಗಿದ್ದರೆ ನಾ ನಿಜವಾಗಿಯೂ ಹೋದುದೆಲ್ಲಿಗೆ? ಯಾರನ್ನು ಕೇಳಬೇಕು? ಹೇಗೆ ಕೇಳಬೇಕು? ಕೊನೆಗೆ ನಿಶ್ಚಯಿಸಿದೆ ನನ್ನನ್ನು ನಾನೇ ಹುಡುಕಿಕೊಳ್ಳಬೇಕು, ನನ್ನೊಳಗೆಲ್ಲೋ "ನಾನು" ಅಡಗಿರಬಹುದು. ಮೊದಲು ಆ " ನಾನು " ಯಾರು ಎಂದು ಕಂಡುಕೊಳ್ಳಬೇಕು. ಸಿಗಬಹುದೇ? ಗೊತ್ತಿಲ್ಲ. - ಎಲ್. ಎಸ್. ಶಾಸ್ತ್ರಿ
bottom of page