top of page

ಎಲ್ಲೆಗಳ ಮೀರಿ

ಕತ್ತಲ ಗರ್ಭದೊಳಗಿಂದಲೇ  ಮೊಳೆತು ಕುಡಿಯೊಡೆದು  ಹೊರಬಂದ ಬೆಳಕಿನ ಬೀಜ  ಕತ್ತಲಿನ ತೆಕ್ಕೆಯೊಳಗೇ ಇಷ್ಟೊಂದು ಬೆಳಕೇ  ಎಲ್ಲಿತ್ತು ಈ ತೇಜ ...? ಎತ್ತರಗಳಲ್ಲಿದೆಯೇ ಉತ್ತರ  ಆಳಗಳಲ್ಲಿದೆಯೇ ಅರಿವು  ಆಳ - ಎತ್ತರಗಳ  ಮೀರಿವೆಯೇ ಗೆಲವು  ? ಸೋಲು -ಗೆಲುವಿನ  ಇತಿ -ಮಿತಿಗಳಾಚೆಗೂ  ಕೈ ಬೀಸಿ ಕರೆದಿದೆ ತಿಳಿವು  ಈಸುವ ಮೀನಿಗೆ  ನೀರಿನ ಆಳದ ಅರಿವಿಲ್ಲ  ನೀರಿಗೋ , ಮೀನಿನೊಳಗಿನ ಅರಿವಿಲ್ಲ  ಅರ್ಥ ಅನಿವಾರ್ಯವಲ್ಲ ! ನಿಗೂಢ ! ಸುಮ್ಮನೆ ಹಾಗೇ ಸಾಗಿದರಾಯಿತು  ಅದರ ಪಾಡಿಗೆ ಅದು  ಇದರ ಪಾಡಿಗೆ ಇದು  ಯಾರಿಗೂ ಲೆಕ್ಕ ಒಪ್ಪಿಸಬೇಕಿಲ್ಲ  ಪೂರ್ಣ ವಿರಾಮದಲಿ ಯಾವುದೂ ಇಲ್ಲ  ಅದು ಸರಿಯೋ  ಇದು ಬೆಸವೋ  ತರ್ಕಕ್ಕೆ ತರ್ಕ ಸಲ್ಲ  ಇಷ್ಟೇ , ಹೀಗೇ  ಎಂಬ ನಿರ್ಧಾರವಿಲ್ಲ .... ಕೊನೆಯಿಲ್ಲ ,ಮೊದಲೂ ಇಲ್ಲ  ಎಲ್ಲೆಗಳ ಮೀರಿಯೂ  ಉತ್ತರಗಳಿಲ್ಲ .....! - ಪ್ರಭಾಕರ  ತಾಮ್ರಗೌರಿ  ಗೋಕರ್ಣ

ಎಲ್ಲೆಗಳ ಮೀರಿ
bottom of page