top of page
ಉತ್ಖನನ
ಈ ಬದುಕು ಮಣ್ಣಿನಂತೆ ಒಮ್ಮೊಮ್ಮೆ ಬೇಕಾಗಿಯೋ ಅಥವಾ ಬೇಡವಾದರೂ ಮನದ ನೆಲದ ಪದರಗಳ ಹುಡುಕಿ ಕೆದಕಿ ಅಗೆದು ಸುಮ್ಮನೆ ನೋಯಿಸುತ್ತೇವೆ ಭೂಗರ್ಭದಲಿ ಅಡಗಿದ ರತ್ನಗಳ ಹುಡುಕುವಂತೆ ಇದ್ದದ್ದು ಇಲ್ಲದ್ದನ್ನೆಲ್ಲ ಬಗೆದು ಕೆಸರ ಲೇಪನ ಮಾಡಿಕೊಂಡು ವಿನಾ ಕಾರಣ ದಣಿಯುತ್ತೇವೆ ಇರಲಿ ಬಿಡಿ ಎಲ್ಲವೂ ಇದ್ದಂತೆ ಬದುಕು ಭೂಮಿಯೆಲ್ಲವೂ ತೋಡಿದಷ್ಟೂ ನೋವೇ ಹೆಚ್ಚು ಎಲ್ಲ ಹಾಗೆಯೇ ಕಾಲಗರ್ಭದಲಿ ಹೂತಿರಲಿ ಮೇಲ್ಪದರ ಹಸಿರು ಹಾಸಿರಲಿ ಹೊಂಬಿಸಿಲಲಿ ಎಲ್ಲವೂ ಮಿನುಗಿ ಮಿಂಚಿ ಕಣ್ಮನವ ತುಂಬುತಿರಲಿ
ಶಾಂತಲಾ ರಾಜಗೋಪಾಲ್ ಬೆಂಗಳೂರು
bottom of page