top of page

ಈಜುತಿಹ ಮೀನು

ಈಜುತಿದೆ ನವ ಮೀನಿಂದು ಈಜುತಿದೆ ಶರಧಿಯಲಿ ಮಿಂದು// ಜಲರಾಶಿಯೆಲ್ಲ ತನ್ನದೆಂದು ಮೂಲ ಬಿಂದುವೂ ನನದೆಂದು ಆಳಗಲವೂ ನನ್ನದೆಂದು ಈಜುತಿದೆ ಯವ್ವನದ ಮೀನಿಂದು// ಬಾಲ್ಯದಲಿ ತಾಯ ಹಿಂದಿದ್ದು ಯವ್ವನದಲಿ ಕೆಳೆಯರ ಹೊಂದಿ ಮುಪ್ಪಿನ ಹೊತ್ತನರಿಯದಿಂದು ಈಜುತಿದೆ ಹುಮ್ಮಸ್ಸಿನ ಮೀನಿಂದು// ಅಲೆಗಳಿಗೆ ಎದುರಾಗಿ ನಿಂದು ಭಯವೆಂಬ ತಿರುಳ ತೊರೆದು ಬಿಸಿ ರಕ್ತದ ಶಕ್ತಿಯ ಹೊದ್ದು ಈಜುತಿದೆ ಕೊಬ್ಬಿದ ಮೀನಿಂದು// ಭೋರ್ಗರೆತಕೂ ಸೋಲೆನೆಂದು ಭವಸಾಗರವ ಗೆಲುವೆನೆಂದು ಹೆಜ್ಜೆಗುರುತ ಹಿಡಿಯಿರೆಂದು ಈಜುತಿದೆ ಉತ್ಸಾಹದ ಮೀನಿಂದು// ಜಗವೇ ತನ್ನ‌ ಮುಷ್ಠಿಯೊಳೆಂದು ತನಗಾರು ಇದಿರಿಲ್ಲವೆಂದು ಮರೆತು‌ಕಾಲ ಕ್ಷಣಿಕವೆಂಬುದು ಈಜುತಿದೆ ಉಲ್ಲಾಸದ ಮೀನಿಂದು// ಆಳದ ಅಲೆಗಳ ಅಡಗಿಸುವೆನೆಂದು ಮುತ್ತುಗಳ ಹೆಕ್ಕಿ ತರುವೆನೆಂದು ಸುನಾಮಿಯ ತಲ್ಲಣಿಸುವೆನೆಂದು ಈಜುತಿದೆ ಚೈತನ್ಯದ ಮೀನಿಂದು// - ಭವಾನಿ ಗೌಡ

ಈಜುತಿಹ ಮೀನು
bottom of page