top of page

ಇಳೆ ತಣಿಸು ಮಳೆಯೆ

ಮಳೆ ಹನಿಸು‌ ಬುವಿ ತಣಿಸು ಓ‌ ಮೇಘ ಮಾಲೆ ಬಿರುಕು ನೆಲಕೆಲ್ಲಿ ಹಲ ಬರವಿಳೆಯ ಮೇಲೆ. ಬತ್ತಿಹುದು ಕೆರೆ ಬಾವಿ ಇಳಿದು ಬಾ ಗಂಗೆ ಹೊಳೆ ಹಳ್ಳ ನಗುತಿರಲು ನಿನಗೆ ಶರಣೆಂಬೆ ಕೃಷವಾದ ತರುಲತೆಯ ಬಳಲಿಕೆಯ ಬಾಳು ಕೊರಕೊರಗಿ ಸೊರಗುತಿಹ ಜೀವಿಗಳ ಗೋಳು ನೀಗಿಸುತ ಬಾ ತಾಯೆ ಬೇಗ ನೀ ಇಳೆಗೆ ಸಂತಸದ ನಿಟ್ಟುಸಿರು ನೀ ಬರುವ ಘಳಿಗೆ ಕಾರ್ಮೋಡ ಕರಕರಗಿ ಸುರಿಸುರಿಯೆ ಮಳೆಯು ಬರವೀಗ ಸರಿಸರಿದು ಹಸಿ ಹಸಿರು ಇಳೆಯು. ಸಾವಿತ್ರಿ ಮಾಸ್ಕೇರಿ ೯೫೯೧೦೫೧೪೩೭

ಇಳೆ ತಣಿಸು ಮಳೆಯೆ
bottom of page