ಇಳಿದಳೆದು ಕಳೆದುದನು
ಇಳಿದಳೆದು ಕಳೆದುದನು..... ಇನ್ನೂ ಇಳಿವೆಯಾ ನೀನು? ಆಳ ತೋರಿಸಲೇನು.? ಮತ್ತೆ ಮರಳಿನ ಮೇಲೆ ತುಂಬಲಿಹೆಯೇನು.? ಇಳಿದು ಹೋಗುವುದೆಲ್ಲ ಇಳಿದೇ ಹೋಗುವುದಿಲ್ಲ.. ಕಳೆದುಕೊಳ್ಳುವುದೆಲ್ಲ ಕಳೆದೇಹೋಗುವುದಿಲ್ಲ.! ತುಸುಹೊತ್ತು ಕಾಯಲಾರೆಯಾ.? ಸುಡುಬಿಸಿಲು,ಕೊರೆವ ಚಳಿ,ಆರ್ಭಟದ ಮಳೆ ಗಾಳಿ ಅವಗಢಗಳನೆಲ್ಲ ಸಹಿಸಿ,ಸಹಿಸಿ. ನನಗಾದರೋ ಮನೆಯುಂಟು,ಮಠ ವುಂಟು.! ನಿನಗಾದರೋ ಏನಿಲ್ಲದೇ ನಿಲುವ ಹಠವುಂಟು. ನನಗಾದರೋ ಆಗಾಗ, ಮರಳ ಮೇಲೆ ಅಲೆಯುವ ಮರುಳು.... ನಿನಗೇಕೆ ಇಳಿದರೂ ಮತ್ತೆ ಮರಳುವ ಮರುಳು..? ಭರತಖಂಡದ ಸುತ್ತ ನಿನ್ನ ಏರಿಳಿತ.....! ಕೇಳಿಸದ ಕಿವಿಗೂ ಕೇಳ್ವ ಮನದ ಮೊರೆತ. ಏರುವುದು,ಇಳಿಯುವುದು ನಮಗೆ ಇದ್ದದ್ದೇ. ಧೈರ್ಯ ತುಂಬುವೆ ನಾನು ಜೊತೆಗೆ ಇದ್ದಿದ್ದೇ. ಜಿ.ಎಸ್.ಹೆಗಡೆ ಕಣ್ಣಿ