top of page
ಇರುವು
ಇದ್ದು ಬಿಡಬೇಕು ಮಂಜಿನ ಮಬ್ಬಿನಂತೆ ಕಂಡರೂ ಕಾಣದಂತೆ ಒಂದಿಷ್ಟೂ ಅರ್ಥವಾಗದಂತೆ ಇದ್ದೇವೋ ಇಲ್ಲವೋ ಎಂದು ತಡಕಾಡುವಂತೆ ಒಂದಿಷ್ಟು ಹೊತ್ತಿನ ಹುಡುಕಾಟದಂತೆ ಹೇಗಿದ್ದರೂ ಪ್ರಕಟವಾಗುತ್ತೇವೆ ಬದುಕ ವಾಸ್ತವದ ರವಿ ಕಿರಣಗಳು ಪ್ರಖರಗೊಂಡಂತೆ ಅಲ್ಲಿಯವರೆಗಾದರೂ ಮಬ್ಬಿನ ಮಾಯೆ ಮುಸುಕಿರಲಿ ಕನಸಿನ ಇಬ್ಬನಿಯ ತ ಬ್ಬಿದ ಅನುಭೂತಿಯಿರಲಿ
ಶಾಂತಲಾ ರಾಜಗೋಪಾಲ್ ಬೆಂಗಳೂರು
bottom of page