top of page

ಇನ್ನೆಷ್ಟು ತ್ಯಾಗ ಮಾಡಬೇಕು

ಒಡಲಲ್ಲಿ ನಿನ್ನ ಕುಲದ ಕುಡಿಯನು
ಜತವಾಗಿಸಿಕೊಂಡಿರುವೆ
ನಿನ್ನ ಕೆಣಕಿಸಿ ಜನರು
ಉಡಾಫೆಯ ನಗು ನಕ್ಕರು
ನಿನ್ನನ್ನು ನಾನು ಸಂತೈಸಿರುವೆ ತಾಳ್ಮೆ ಕಳೆದುಕೊಂಡು
ಸೋತ ಮೊಗವ ಹೊತ್ತು
ಮನೆಯ ಮೂಲೆ ಸಂಧಿಯಲಿ
ಕೂತಾಗ ನಗುವಲ್ಲೇ ತೇಲಿಸಿದ್ದೇನೆ ಮದಿರೆಯಲಿ ಮಿಂದೆದ್ದಾಗ
ನಿನ್ನ ಮರ್ಯಾದೆ ಮುಕ್ಕಾಗದ ಹಾಗೆ
ನಟಿಸಿದ್ದೇನೆ
ಕೋಪಾಗ್ನಿಗೆ ಬೆನ್ನ ಮೇಲಿನ
ಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ ನಿನ್ನ ಬರುವಿಕೆಗಾಗಿ
ಅದೆಷ್ಟು ಇರುಳನ್ನು
ಏಕಾಂತದಲ್ಲೇ ಕಳೆದಿದ್ದೇನೆ
ನಿನ್ನ ಕಾಮದ ಜ್ವಾಲಾಮುಖಿಗೆ
ಸುಟ್ಟು ಕರಕಲಾಗಿದ್ದೇನೆ
ನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು....... ______________________ _____________ ಅನಿಲ ಕಾಮತ

ಇನ್ನೆಷ್ಟು ತ್ಯಾಗ ಮಾಡಬೇಕು

©Alochane.com 

bottom of page