ಆಸೆ ಹೂಗಳು ಅರಳಿವೆ
ಮಳೆಗಾಲದ ಆರಂಭ. ವರ್ಷಕೊಂದಿನ ಖುಷಿಯ ಪೂರಣ ಹೂವ ತೋರಣ . ಕಟ್ಟಿದೆ. ನಿತ್ಯ ನೋವಿನ ನರಕದೊಳಗೂ ಸಗ್ಗ ಬಾಗಿಲ ತೆರೆದಿದೆ. ಸುತ್ತ ಮುತ್ತಲು .ಭಯದ ಹುತ್ತವು ಬಿಟ್ಟು ಬಿಡದಲೆ ಬೆಳೆದಿದೆ- ನಡುವೆ ಕತ್ತಲ .ಮೊತ್ತದೊಳಗೂ ಬೆಳಕ ಕಿಂಡಿಯು ಕಂಡಿದೆ. ಕನಸ ಬಣ್ಣವು ಕರಗಿಹೋಗಿದೆ ಬಸಿರ ಬವಣೆಯ ಮಳೆಯಲಿ- ಹಸಿರು ಮೊಳೆತಿದೆ ಉಸಿರ ತುಂಬಿದೆ, .ಸೋತು ಸೊರಗಿದ ಬಸಿರಲಿ. ಸಾಲು,ಸಾಲಲಿ ನೇಣಿಗೇರಲು ಕೊರಳದೆಷ್ಟೋ ಕಾದಿವೆ- ಸಾವ ನೆರಳಲು ನೋವ ನರಳಲು ಆಸೆ ಹೂಗಳು ಅರಳಿವೆ. ವರ್ಷಕೊಂದಿನ ಹರ್ಷ ಪೂರಣ ಹೂವ ತೋರಣ ಕಟ್ಟಿದೆ-- ನಿತ್ಯ ನರಕದ ಬದುಕಿನೊಳಗೂ . ಸಗ್ಗ ಬಾಗಿಲ ತೆರೆದಿದೆ...!!! ಅಬ್ಳಿ ಹೆಗಡೆ ..