top of page
ಆಸೆ-ಕನಸು
ಮುನಿಸುಗೊಂಡು ಮನಸು ಮುಚ್ಚಿದಾಗ- ಆಸೆ ಕದತೆರೆದು ಕರೆಯುತ್ತದೆ..ಸುಂದರ ಕನಸುಗಳನ್ನ.... ಸಾಂತ್ವನ ಹೇಳುವದಕ್ಕೆ.... ಬಣ್ಣದ ರಂಗೋಲಿ ಬಿಡಿಸಿ, ಖುಷಿ ಪಡುವದಕ್ಕೆ.... ಖಾಲಿ ಬಾನಲ್ಲಿ ಚುಕ್ಕಿಗಳ ಚೆಲ್ಲಾಡುವದಕ್ಕೆ.... ಪೇಲವ ಮುಖದ ಒಣಗಿದ ತುಟಿಗೆ ಹೂ ಮುತ್ತನೊತ್ತಿ, ಹಸಿ,ಹಸಿಯಾಗಿಸುವದಕ್ಕೆ.... ಮಾಗಿಯ ಚಳಿಗೆ ನಡುಗುವ ಮೈ,ಮೈ- ಸ್ಪರ್ಶಿಸಿ,ಬೆಂಕಿಯಕಿಡಿ- ಹೊತ್ತಿಸಿ,......... ಬೆಚ್ಚಗಾಗಿಸುವದಕ್ಕೆ..... "ಅರ್ಥ"ವಾಗದ್ದನ್ನು ಅರ್ಥವಾಗಿಸುವದಕ್ಕೆ.... "ಅಸಹ್ಯ"ವೆನಿಸಿದ್ದನ್ನೂ ಸಹ್ಯವಾಗಿಸುವದಕ್ಕೆ...... "ಆಸೆ" ಕದತೆರೆದು, ಕರೆಯುತ್ತದೆ..ಸುಂದರ ಕನಸುಗಳನ್ನ....! --ಅಬ್ಳಿ,ಹೆಗಡೆ.**
bottom of page