ಆತಂಕ
ಅಂತೂ ಅಂತಕನ ಆತಂಕ ಇದ್ದೇ ಇದೆ ಅಂತೆ ಕಂತೆಗಳ ಸಂತೆಯಲಿ ಸತ್ತವರ ಬೂದಿರಾಶಿ, ' ಚೀನಿಕಡಿ' ಯಂತೆ ಕೊಳ್ಳಿ ಇಡುವರು ಮರುಕೊಳ್ಳಿ ಸಾಚುವರು ಮಾಧ್ ಯಮದ ಗದ್ದಲದ ನಡುವೆ ಮಣ್ಣ ಎರಚುವರು ಸತ್ಯ ಸಮಾಧಿಗೆ ಈ ಇವರದೇ ಕಚ್ಚಾಟ ಕೆಸರೆರಚಾಟದೆದುರು ಇದರ ಉಸಾಬರಿಯೇ ಸಾ ಕೆನಿಸಿದರೂ ಸಂಕಟ ಉಭಯ ಬೇಡ ಬೇಡ ಎಂದವರೂ ಇಂದು ಚುಚ್ಚಿಸಿಕೊಳ್ಳುವುದ ಕಂಡಾಗ ತಣ್ಣಗಿನ ಭಯ ! ಅಲೆ ಇಳಿದ ನಿರಾತಂಕ ದೊಳಗೂ ಒಂದು ಆತಂಕ ಮರವೇರಿಸಿ ಬಂದ ಮರುಕ್ಷಣ ಬೇತಾಳನೇರಿದ ಬೆನ್ನತನಕ ಅಲೆಗಿಲ್ಲ ಕೊನೆ, ಅಂತೆ ಬೇತಾಳನ ಪ್ರಶ್ನೆ ಗ್ರುಪ್ಪಿನಲಿ ರಪ್ಪ್ ಎಂದು "ರಿಪ್"(RIP)ನ್ನು ಹಾಕುವುದು ನಿಧನಕ್ಕೆ ನಿಧಾನದಲಿ ಶಾಂತಿಯನು ಕೋರುವುದು ಎಷ್ಟು ಸುಲಭ ಅಲೆ ಕಾಲಬುಡಕ್ಕೇ ಬಂದು ಮರಳನೆಲ ಕುಸಿದು ಎಳೆದಾಗ ನಿಶ್ಶಬ್ದದಾಚೆಯ ಶಬ್ದದಲಿ ನಿಸ್ಸೀಮದಾಚೆಯ ಶೂನ್ಯದಲಿ ಸೇರಿ ಹೋಗುವೆ ನಾನೂ ಒಬ್ಬ ಅಪ್ಪ- ಅಮ್ಮರ ಪುಣ್ಯ ನಾನು ಮಾ ಡದ ಪಾಪ ನಮ್ಮದೇ ಕೇರಿ- ಕೋಟೆ ಇಲ್ಲಿ ನಗಣ್ಯ ಯಾಕೆಂದರೆ " ವಸುಧೈವ ಕುಟುಂಬಕಂ" ಎಂದ ಅನಂತನ ದೊಡ್ಡ ತಕ್ಕಡಿಯ ಲೆಕ್ಕ ಬೇರೆ ಅನಂತರ ಅನಂತರ ಎಲ್ಲೆಲ್ಲೂ ನ- ಅಂತರ ನಾಳಿನ ' ದಿನಸಿ ಚೀಟಿ' ಯಲಿ ಆರ ಹೆಸರಿಹುದೋ ಆತಂಕ ಆತನಕ ಇದ್ದೇ ಇದೆ "ಹತ್ತು" ವ ವರೆಗೆ. - ಡಾ. ಜಿ.ಎಸ್. ಹೆಗಡೆ ಹಡಿನಬಾಳ.