top of page

ಅಲ್ಲಿಯೂ ಗಂಧವಿದೆ

ಅಲ್ಲಿಯೂ ಗಂಧವಿದೆ ಅಲ್ಲಿಯೂ ಪರಿಮಳವಿದೆ ಆಸ್ವಾದನೆಗೆ ಮೂಗಿಗೆ, ಕ್ಷೇಮವಿರುವ ಹೊರಳೆಗೆ! ಹಸಿದು "ಅನ್ನಾss...." ಎಂಬ ದನಿಯು ಕಿವಿಯ ಹೊರಳೆ ಮುಟ್ಟಿ ಇ ಳಿ ದು ಎದೆಗೆ, ಹುಡುಕಿ ಎಲ್ಲೋ ಇಷ್ಟು ಅಸನ ತಂದು ಇತ್ತು ಹಸಿವ ಕಳೆವ ಕರದ ಬೆರಳ ಪಕಳೆಯೊಳಗೆ ಅಲ್ಲಿಯೂ ಗಂಧವಿದೆ. ಒಡಲಿಗಷ್ಟೇ ಹಸಿವೆಯಲ್ಲ, ಮನದ ಒಡಲಿಗಿನ್ನೂ ಅಧಿಕ! ಹಾಡು ಬರಹ ಓಟ ಆಟ ಕೆಳಗೆ ಉರುಳೆ ಏಳುವಾಟ ಕಾಟ ಕಡಲ ಚಲದ ದೋಣಿ ಏರಿ ಗುರಿಗೆ ನಡೆವ ನರರ ಕೈಯ ಹಿಡಿದು ಗಮ್ಯ ತಾಣ ತಲುಪಿಸುವ ಕರದ ಬೆರಳ ದಳದ, ಕರುಣೆಯಲ್ಲಿ ಗಂಧವಿದೆ! ಗಣಪತಿ ಗೌಡ,ಹೊನ್ನಳ್ಳಿ

ಅಲ್ಲಿಯೂ ಗಂಧವಿದೆ
bottom of page