top of page

ಅಡಿಗೆಯವಳ ಮಗಳು
ಬೇಯಿಸಿ ಬಡಿಸುವುದನ್ನೇ ಬದುಕಾಗಿಸಿಕೊಂಡವಳ ಮಗಳು ಬರೀ ಅಡಿಗೆ ಮಾಡುವುದನ್ನು ಮಾತ್ರ ಆಟವಾಡುತ್ತಿದ್ದಳು ದೊಡ್ಡ ದೊಡ್ಡ ಬೊಂಬೆಗಳನ್ನು ಕುಣಿಸುವವರ ನಡುವೆ ಇವಳೊಂದು ಚಿಕ್ಕ ಗೆಜ್ಜೆಯನ್ನಾದರೂ ಕಟ್ಟಿ ಕುಣಿಯಲೆಂದು ಎಣಿಸಿದವಳೇ ಒಂದು ಸಂಜೆ ಪುಟಾಣಿ ಕನಸುಗಳನ್ನು ಕೊಟ್ಟ ು ಬಂದೆ ನಾನು ಬೆಳಗ್ಗೆ ಹೋಗಿ ನೋಡಿದರೆ ಅದನ್ನೂ ಬಡಿಸಲೆಂದೇ ಹುರಿದುಬಿಟ್ಟಿದ್ದಳು ಅವಳಿಗೆ ಕಲಿಸಿದ ಅಕ್ಷರಗಳೂ ಅನ್ನವಾಗುವ ಪರಿ ಕಂಡು ಅಚ್ಚರಿಗೊಂಡ ನಾನೀಗ ನನ್ನ ಭ್ರಮೆಗಳನ್ನು ಅವಳ ತಲೆಗೆ ತುರುಕುವುದ ಬಿಟ್ಟೇ ಬಿಟ್ಟಿದ್ದೇನೆ ಸಂಧ್ಯಾ ವಿನಾಯಕ ಅಘನಾಶಿನಿ
bottom of page