top of page

ಅಚ್ಚಮೆಚ್ಚಿನ ಅಭ್ಯಾಗತ

ಅಪಾರ ವಿಸ್ತಾರದ ಒಲವನ್ನು  ಅತ್ಯಂತ ಭಾವಪರವಶಗೊಳಿಸುವಂತೆ  ಮಧುಶಾಲೆಯಲಿ ಅಪರೂಪದ ಸಿಹಿ  ಗಂಧದ ಜೇನಿನಲದ್ದಿದ ಹೂಗಳನು , ಮಧುರ ಚಿರಸ್ಥಾಯಿ ನೆನಪುಗಳನ್ನು  ತಂದು ಸುರುಹಿದ ಅಪರೂಪದವನವನು.    ಒಲವಿನ ಹೂವಿನಂತೆ ಅಥಿತಿ ಮನಕೆ ಮುದ  ನೀಡುವ ಭೃಂಗಸ್ವರ್ಗದ ಸಿಹಿಸ್ಪರ್ಶ  ನೀಡುವ ಹೂ ಕನಸುಗಳ ವ್ಯಾಪಾರಿ  ಅಸಮಾನ ಪರಿಮಳದ ಹೂಗಳಿಗಿಂತ  ತುಸು ಹೆಚ್ಚೇ ಪ್ರೀತಿಯಾಸಕ್ತಿ ವ್ಯಕ್ತ ಪಡಿಸುವ  ಅಪ್ರತಿಮ ಪ್ರೀತಿಯವನು.  ತನ್ನೆಡೆಯಿಂದ ಹೊರಡುವ  ಗಾಳಿಯ ಗಂಧದಿಂದ ಭಾವನೆಗಳ  ಲಲಿತವಾಗುವಂತೆ ನನ್ನೆಡೆಗೆ ತಲುಪಿಸುವ  ಪ್ರೇಷಕ, ಇಂಥವೆ ಶಿಫಾರಸ್ಸಿನ  ಹಲವು ಸಂದೇಶಗಳ ಭಾವಾನುವಾದಕ  ಅವನಿರುವಿನಲಿ, ಸಾಟಿಯಿಲ್ಲದ ನನ್ನ  ನೆಚ್ಚಿನ ಹಲವು ಕನಸುಗಳ ಪರಿವೀಕ್ಷಕ  ಸರಣಿ ಕನಸುಗಳನ್ನು ಈಡೇರಿಸುವಂತೆ,  ನನ್ನ ಮೂಲಕ ಸ್ಪೂರ್ತಿಗೆ ನಿಂತ  ಅಚ್ಚುಮೆಚ್ಚಿನ ಅಭ‍್ಯಾಗತ ಆಗುಂತಕನವನು. ಲಕ್ಷ್ಮೀ ದಾವಣಗೆರೆ

ಅಚ್ಚಮೆಚ್ಚಿನ ಅಭ್ಯಾಗತ
bottom of page