top of page

ಅಗಲಿಕೆ
ವಿದ್ಯಾರ್ಥಿ ಜೀವನದಲ್ಲಿ ಸ್ನೇಹಿತೆಯರೆಲ್ಲ ಜೊತೆಗೂಡಿ! ಪರಸ್ಪರ ಬೀಳ್ಕೊಡುವಾಗ ಹಸ್ತಾಕ್ಷರ ನೀಡುವುದು ರೂಢಿ!! ಭೇಟಿ ಅನಿರೀಕ್ಷಿತ.... ಅಗಲುವಿಕೆ ಅನಿವಾರ್ಯ - ನಿಶ್ಚಿತ!! ನಶ್ವರತೆಯ ಅರಿವಿದ್ದರೂ ಮನುಜ ಭಾವನೆಗಳ ಬಂಧಿತ..!! ತಾತ್ಕಾಲಿಕ ಅಗಲಿಕೆ ತರುವುದು ಬೇಸರ! ಶಾಶ್ವತ ಅಗಲಿಕೆಯ ನೋವು ನಿರಂತರ!! ಅಸಹನೀಯ ಅಗಲಿಕೆಯ ಸಹ್ಯವಾಗಿಸುತ್ತ..! ಸಾಗುತ್ತೇವೆ ನೆಮ್ಮದಿಯ ಅರಸುತ್ತ!! ಕಾಲನೆಡೆಗೆ.... ಕರೆ ಬರುವವರೆಗೆ!!!!! ಸಾವಿತ್ರಿ ಶ ಾಸ್ತ್ರಿ, ಶಿರಸಿ
bottom of page