top of page

ಅಕ್ಷರ ಸೂರ್ಯ ದಿನಕರ ದೇಸಾಯಿ

ಚುಟುಕು ಬ್ರಹ್ಮ, ಸಮಾಜ ಸೇವಕ, ಸಮಾಜವಾದಿ ನೇತಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಬೆಳಕು ಚೆಲ್ಲಿದ ಸೂರ್ಯ, ರಾಜಕಾರಣಿ ಹೀಗೆ ಬಹುಮುಖಿ ವ್ಯಕ್ತಿತ್ವದ ದೇಸಾಯಿ ದಿನಕರರ 111 ನೇ ಜನುಮದಿನದ (10/09/1909) ಸ್ಮರಣೆಯಲ್ಲಿ ಆ ಮಹಾನ್ ಚೇತನಕ್ಕೆ 'ಆಲೋಚನೆ' ಯು ಶಿರಬಾಗಿ ಈ ಮೂಲಕ ನಮಿಸುತ್ತದೆ -ಸಂಪಾದಕ ಜನರು ಬರುತ್ತಾರೆ ಹೋಗುತ್ತಾರೆ.ಅವರಲ್ಲಿ ಕೆಲವರು ಮಾತ್ರ ಜನ ಮನದಲ್ಲಿ ಶಾಶ್ವತವಾಗಿ ನೆಲೆನಿಲ್ಲುತ್ತಾರೆ.ಅವರ ಸಾಧನೆ,ಚಿಂತನೆ, ಪರಿಣತಿ, ಕರ್ತೃತ್ವಶಕ್ಕಿ ಮುಂದಿನ ತಲೆಮಾರಿಗು ಮಾದರಿಯಾಗಿ ಉಳಿಯುತ್ತದೆ.   ಸಪ್ಟಂಬರ ಹತ್ತು ಸಮಾಜ ಸೇವಕ,ಸಮಾಜವಾದಿ ದಿನಕರ ದೇಸಾಯಿಯವರ ಜನ್ಮದಿನ.ದಿನಕರನ ಚುಟಕಗಳಲ್ಲಿ ಅವರ ಆತ್ಮ ಚರಿತ್ರೆಯ ಹೊಳಹುಗಳು ದಂಡಿಯಾಗಿ ಸಿಗುತ್ತವೆ. ಅವರ ಕವನ, ಬರಹ,ಮಕ್ಕಳ ಪದ್ಯ, ಚುಟುಕಗಳನ್ನೆ ಆಕರವಾಗಿಟ್ಟುಕೊಂಡು ದಿನಕರರ ವ್ಯಕ್ತಿತ್ವ ರೂಪಣವನ್ನು ಸೃಜನಶೀಲ ಬರಹಗಾರರು ಮಾಡುವ ಅಗತ್ಯವಿದೆ. ನಾನು ಹುಟ್ಟಿದ್ದು ಸಪ್ಟಂಬರದ ಹತ್ತು ನೆಲತಾಯಿ ಬಸಿರಾಗಿ ಕದಿರು ಮೂಡಿತ್ತು ನನ್ನ ತಂದೆಯವರು ದತ್ತಣ್ಣನವರು ಹಳ್ಳಿಯಲಿ ಗಿಡಮರದ ಜೊತೆಗೆ ಬೆಳೆದವರು ನಾನೊಬ್ಬ ಪಟ್ಟಣದ ನಿವಾಸಿ ಡಾಂಬರು ರಸ್ತೆಗಳ ನೋಡಿದೆನು ಮೂಸಿ ನಾನು ತೀರಿಸಲಾರೆ ನೀನು ಕೊಟ್ಟ ಸಾಲ ದತ್ತಣ್ಣ ನಿನ್ನ ಹೃದಯದ ಹಣೆ ವಿಶಾಲ ನನಗೆ ಮೂರು ಜನ ಮಕ್ಕಳು ಹಿರಿಯ ಮಗು ಬಾಲೆ ಇನ್ನೊಂದು ಹೆಣ್ಣು ಹುಟ್ಟಿದಳು ಆಮೇಲೆ ಗಂಡು ಬೇಕೆಂದು ಬಯಸಿದೆವು ಬಹಳಷ್ಟು ಕೊನೆಗೆ ಹುಟ್ಟಿದ ಗಂಡು ಶಿಕ್ಷಣದ ಟ್ರಸ್ಟು ಹದಿನೆಂಟು ಶಾಲೆ ಕಾಲೇಜುಗಳ ಕಟ್ಟಿ ಬಡಿಸಿದೆನು ಜೀವನದ ರೊಟ್ಟಿ ಇಷ್ಟಾದರು ತೃಪ್ತಿಯಿಲ್ಲವೊ ಕರುಣ ಸಿಂಧು ನಾನು ಮಾಡಿದ್ದು ಬರಿ ಒಂದೆ ಬಿಂದು ನನಗೇಕೆ ಷಷ್ಠ್ಯಬ್ಧಿ ಸಾಕು ಬರವಣಿಗೆ ಕವಿಗೆ ಬೇಕಾಗಿಲ್ಲ ಯಾವುದೆ ಮೆರವಣಿಗೆ ಮೂಲೆಯಲಿ ಕುಳಿತು ಗೀಚಿದರೆ ಒಂದು ಪದ್ಯ ಸಾಕದುವೆ ನುಡಿತಾಯಿಗೆ ನೈವೇದ್ಯ. ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ ದೀನಗಿಂತ ದೇವ ಬಡವನೆಂದು ತಿಳಿದೆಯಾ ಹುಚ್ಚ ನೀನು ಹಳ್ಳಿಗೋಡು ದೀನ ಜನರ ಪಾಡ ನೋಡು ಇರಲು ಗುಡಿಲು ಇಲ್ಲವಲ್ಲ ಆಗೇರ ಸೋಮು ಮುಕ್ರಿ ಓಮು ಹಳ್ಳೇರ ಖೇಮು ಹೆಸರಿಗೆ ಮಾತ್ರ ಹರಿಜನರೊ ಹಗಲಿ ಇರುಳು ಬೆಳಗು ಬೈಗು ದುಡಿದು ಹೊಟ್ಟೆಗೆ ಸಿಗದವರೊ ಇಲ್ಲಾ ಗದ್ದೆ ಇರುವುದು ಹರಿಜನ ಹುದ್ದೆ ನನ್ನ ಉತ್ತರ ಕನ್ನಡ ಜಿಲ್ಲೆ ಬಡತನದ ಬಿಲ್ಲೆ ಈ ಬಿಲ್ಲೆ ಹಚ್ಚಿಕೊಂಡವರಾರು ನಲ್ಲೆ ಆಗೇರ ಮುರಕುಂಡಿ ಹಾಲಕ್ಕಿ ರಾಕು ಮುಕ್ರಿ ವೆಂಕಟರಮಣ ಹಳ್ಳೇರ ತೋಕು ಒಂದು ಬದಿ ಸಹ್ಯಾದ್ರಿ ಒಂದು ಬದಿ ಕಡಲು ನಡು ಮದ್ಯದಲಿ ಅಡಿಕೆ ತೆಂಗುಗಳ ಮಡಿಲು ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ ಇಲ್ಲಿಯೆ ಇನ್ನೊಮ್ಮೆ ಹುಟ್ಟುವೆನು ನಲ್ಲೆ ರೈತರು ಕೂಟವ ಕಟ್ಟಿದರೊ ಒಡೆದಿರು ಘಟ್ಟವ ಹತ್ತಿದರೊ ನಮಗೆ ಇದ್ದ ಭೂಮಿ ನಮಗೆ ಆಗಲಿ ಸ್ವಾಮಿ ಕಾಳಕಾ ಪಿರತಾ ವಿಂದರ ಧರತಾ ವಿಂದರ ಕರತಾ ಕ್ಯಾಂವ ಕ್ಯಾಂವ ಬುಕಲೊ(ಕೊಂಕಣಿ) ಹತ್ತಕ್ಕೆ ದೋಸೆ ಇಪ್ಪತ್ತಕ್ಕೆ ಮೀಸೆ ಮೂವತ್ತಕ್ಕೆ ಅಪ್ಪ ನಲ್ವತ್ತಕ್ಕೆ ದಪ್ಪ ಐವತ್ತಕ್ಕೆ ಮುಪ್ಪ ಅರುವತ್ತಕ್ಕೆ ಕೆಪ್ಪ ನಾ ಬರೆದ ಚುಟಕಗಳ ಸಂಖ್ಯೆ ವಿಪರೀತ ಶೇಕಡಾ ತೊಂಬತ್ತು ಹೊಡೆಯುವುದು ಗೋಥಾ ಉಳಿದ ಹತ್ತರ ಪೈಕಿ ಎಳೆಂಟು ಸತ್ತು ಒಂದೆರಡು ಬದುಕಿದರೆ ಅದು ಮುತ್ತು ಇವನಾರು ಗೊತ್ತೆ ಕರ್ನಾಟಕದ ಗುಂಡು ಇಂದಿರಮ್ಮನ ಕೈಲಿ ರಬ್ಬರಿನ ಚೆಂಡು. ನೋಡು ನಾಡವರೆ ನಿಜ ನಾಡಿಗರು ಕಾಳಗವ ಹೂಡಿಹರು. ಇವನು ಅಂಕೋಲೆಯವ ಮುದುಕಾಗಿ ಸತ್ತ ಇವನ ಕೈಯಳಗಿತ್ತು ಚೌಪದಿಯ ಬೆತ್ತ. ಬಿರುಗಾಳಿಯೆ ಬೇಕು ನಮ್ಮ ಉದ್ಧಾರಕ್ಕೆ ಪೊಳ್ಳು ಮರಗಳನೆಲ್ಲ ಉದುರಿಸಲಿಕ್ಕೆ ನನ್ನ ಕನ್ನಡ ನುಡಿಯೆ ನೀನೆನಿತು ಚೆಂದ ಎನಿತು ಗೀಚಿದರು ಆಗುವುದು ಶ್ರೀಗಂಧ ಬಂಗಾರಕಿಂತಲು ಶ್ರೇಷ್ಠ ನುಡಿ ಸಂಪತ್ತು ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು ನನ್ನ ದೇಹದ ಬೂದಿಯನು ಗಾಳಿಯಲಿ ತೂರಿ ಬಿಡಿ ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ದನ್ಯವಾಯಿತು ಹುಟ್ಟು ಸಾವಿನಲ್ಲಿ ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ ಜೀವ ಇಮನ್ನಾದರೂ ನಿಜ ಸೇವೆ ಗೈಯಲಿಕೆ ಬರಲಿ ಮುಂದು. ‌ ‌ ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ ಕೆಡುಕು ಮಾಡಿದರೆ ಪಾಪ ಬಿಕನಾಸಿ ಯಾವ ಪೂಜೆ ಮಾಡಿದರೂ ವ್ಯರ್ಥ ಜನಸೇವೆಯೆ ಪೂಜೆ ಇದುವೆ ಪುರುಷಾರ್ಥ. ಆ ಪುಣ್ಯ ಪುರುಷನ ಬಗ್ಗೆ ಪಿಎಚ್,ಡಿ ಪ್ರಬಂಧ ಬರೆದು ,ಅವರನ್ನು ಕಂಡು,ಓದಿ,ಅನುಸಂಧಾನ ನಡೆಸಿ,ಅವರ ಆದರ್ಶದ ಬೆಳಕಿನಲ್ಲಿ ನಡೆಯ ಕಲಿಯ ತೊಡಗಿದವನು ನಾನು.ಅವರಿಗೆ ಅವರೆ ಹೋಲಿಕೆ.ಇದು ನನ್ನ ನೆನಪಿನಿಂದ ಹೆಕ್ಕಿ ಬರೆದಿದ್ದು.ಕಣ್ಮುಂದೆ ಪಠ್ಯ ಇಲ್ಲ. ಎಲ್ಲವನ್ನು ಸರಿಪಡಿಸಿಕೊಂಡು ದಿನಕರನ್ನು  ಮತ್ತೆ ಮತ್ತೆ ಕರೆದು ಕೃತಾರ್ಥರಾಗೋಣ. ಅವರ ಬರಹಕ್ಕೆ  ವ್ಯಾಖ್ಯಾನದ ಹಂಗಿಲ್ಲ..ಅದು ಬೆಲ್ಲದ ರುಚಿಯ ಬಣ್ಣಿಸ ಹೊರಟಂತೆ ನಗೆಪಾಟಲು. ಸಹ್ಯದ್ರಿಯಾಗಿರಲಿ ಜೀವನದ ಕನಸು ಕಾವೇರಿಯಂತಿರಲಿ ಮಾನವನ ಮನಸು ಜೋಗ ಜಲಪಾತವಾಗಿರಲಿ ಗೈವ ಕಾರ್ಯ ಯಶಗಳಿಸುತಿರಬೇಕು ಕಡಲ ಔದಾರ್ಯ   ‌    ‌                              ಡಾ.ಶ್ರೀಪಾದ ಶೆಟ್ಟಿ

ಅಕ್ಷರ ಸೂರ್ಯ ದಿನಕರ ದೇಸಾಯಿ
bottom of page