top of page

ಅಂತರಗಂಗೆ

ಹಾಳು ಮರೆವು ನೆನಪಿಸುತ್ತದೆ ವಯಸ್ಸಾಗುತ್ತಿದೆ ಎಂದು ತಲೆ ಮೇಲಿನ ಬೆಳ್ಳಿ ಕೂದಲು ಸಾರಿ ಸಾರಿ ಹೇಳುತ್ತದೆ ಯೌವ್ವನ. ಸರಿಯುತ್ತಿದೆ ಎಂದು ಸಡಿಲವಾದ ಚರ್ಮದ ಪದರು ಕಾಂತಿ ಕಳಗೊಂಡು ಅರುಹುತ್ತಿದೆ ಸಾಕಿನ್ನು ಒನಪು ವಯ್ಯಾರ ಮೇಕಪ್ಪು ,ಸುಣ್ಣ ಬಣ್ಣ! ಇಷ್ಟಾಗಿಯೂ ಒಳಗೊಂದು ಚೈತನ್ಯ ಇದೆಯಲ್ಲ ! ಪುಟಿದೇಳುವ ಅಂತರಗಂಗೆ ವಯಸ್ಸು ದೇಹಕ್ಕೆ ಹೊರತು ತನಗಲ್ಲ ಎಂದು ಕೂಗಿ ಕೂಗಿ ಹೇಳುತ್ತಿದೆ ತಾನು ಚಿರಯೌವ್ವನೆ ಎಂದು! ಇದುವೇ ಬದುಕಿನ ಗುಟ್ಟು ಹುಟ್ಟಿನಿಂದ ಚಟ್ಟದವರೆಗೆ ಮತ್ತೆ ಮತ್ತೆ ಪುಟಿದೇಳುವ ನಿತ್ಯನೂತನೆ ಇವಳು ನಿದ್ದೆಯೊಂದಿಗೆ ದಿನವೂ ಸತ್ತು ಎದ್ದೊಡನೆ ಮತ್ತೆ ಮರುಹುಟ್ಟಿ ಹಳೆಕೊಳೆಯ ತೊಳೆದು ಹೊಸ ಹೊಸ ಹುರುಪಿನೊಂದಿಗೆ ಮೆರೆವ ಕಾಣದಾ ಮನಸೇ ನೀ ಮಾಯೆಯೋ ನಿನ್ನೊಳು ಮಾಯೆಯೋ ನಾ ಕಾಣೆ ಆದರೂ ನೀ ಬಲು ಜಾಣೆ ಚಿವುಟಿದಷ್ಟು ಚಿಗುರುವ ಚೆಲುವು ನೀನೆ ನಮ್ಮೊಳಗನ ಒಲವು ಸುವಿಧಾ ಹಡಿನಬಾಳ ತಮ್ಮ ಬರವಣಿಗೆಯ ಮೂಲಕ ಕನ್ಭನಡ ಸಾಹಿತ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ ಬರಹಗಾರ್ತಿ ಸುವಿಧಾ ಅವರ ಅಂತರಗಂಗೆ ಕವನ ನಿಮ್ಮ ಓದಿಗಾಗಿ. ಸಂಪಾದಕ

ಅಂತರಗಂಗೆ
bottom of page