ಇಂದು ಜನ್ಮದಿನ
ತೆಂಕಣಗಾಳಿಯಾಟವಾಡಿದ ಪಂಜೆ ಮಂಗೇಶರಾಯರು ********ಎಲ್. ಎಸ್. ಶಾಸ್ತ್ರಿ** ನಾಗರಹಾವೆ...ಹಾವೊಳು ಹೂವೆ ಬಾಗಿಲ ಬಿಲದಲಿ ನಿನ್ನಯ ಠಾವೆ...ಬಾ..ಬಾ... ಅರವತ್ತು ವರ್ಷಗಳಿಗೂ ಹಿಂದೆ ತಮ್ಮ ಕನ್ನಡ ಶಾಲಾ ಪಠ್ಯಪುಸ್ತಕದಲ್ಲಿ ಓದಿದವರು ಯಾರೂ ಈ ಪದ್ಯವನ್ನು ಇಂದಿಗೂ ಮರೆತಿಲ್ಲ. ಹಾಗೆಯೇ ಕನ್ನಡ ಕಾವ್ಯಾಧ್ಯಯನ ಮಾಡಿದ ಯಾರೂ ಈ ಕೆಳಗಿನ ಕವನವನ್ನು ಮರೆಯಲು ಸಾಧ್ಯವಿಲ್ಲ. ಎಂಥ ಅದ್ಭುತ ಪದ್ಯವದು! ತೆಂಕಣಗಾಳಿಯಾಟ ******* ಬರಲಿದೆ ಅಹಹಾ ದೂರದಿ ಬರಲಿದೆ ಬುಸುಗುಟ್ಟುವ ಪಾತಾಳದ ಹಾವೋ ಹಸಿವಿನ ಭೂತದ ಕೂಯುವ ಕೂವೋ ಹೊಸತಿದು ಕಾಲನ ಕೋಣದ ಓ... ಓ.. ಉಸುರಿನ ಸುಯ್ಯೋ, ಸೂಸೂಕರಿಸುತೆ ಬರುವದು ಭರಭರ. , ಭ