ಮರೆಯಲಾಗದ ಮಹಾನುಭಾವರು -೧೬೬
ಕಾವ್ಯಲೋಕದ ಮುದ್ದುಕಂದ " ಮುದ್ದಣ" ********** " ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು" ಎಂದರೂ , ಹೆಂಡತಿಗೆ " ಭವತಿ ಭಿಕ್ಷಾಂದೇಹಿ" ಎಂಬ ಸಪ್ತಾಕ್ಷರಿ ಮಂತ್ರ ಬೋಧಿಸಿ " ಕಸ್ತೂರಿ ಕನ್ನಡ"ದಲ್ಲಿ ರಾಮಾಶ್ವಮೇಧದಂತಹ "ಹೃದ್ಯಮಪ್ಪ ಗದ್ಯ ಕೃತಿ" ಯನ್ನು ಕನ್ನಡಿಗರಿಗೆ ನೀಡಿದ ಮುದ್ದಣ ಕವಿ ಉಡುಪಿ ಹತ್ತಿರದ ನಂದಳಿಕೆಯಲ್ಲಿ ೧೮೭೦ ರ ಜನೆವರಿ ೨೪ ರಂದು ಜನಿಸಿದ. ಲಕ್ಷ್ಮಿನಾರಣಪ್ಪ ಬಾಲ್ಯದಲ್ಲಿ ಮುದ್ದು ಮುದ್ದಾಗಿದ್ದ ಕಾರಣಕ್ಕಾಗಿ ಎಲ್ಲರ ಪ್ರೀತಿಯ "ಮುದ್ದಣ್ಣ" ನೆನಿಸಿ ಅದೇ ಕಾವ್ಯನಾಮದಲ್ಲಿ ಅನೇಕ ಅಮೂಲ್ಯ ಕೃತಿಗಳನ್ನು ನೀಡಿದ. ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರಸಂಗ, ಕುಮ