ಯಶಸ್ಸಿನ ಮುನ್ನುಡಿ ಬರೆದ ಉಳವಿ ಕಸಾಪ ಜಿಲ್ಲಾ ಸಮ್ಮೇಳನ
ಎರಡು ದಿವಸಗಳ ಕಾಲ ಜಿಲ್ಲೆಯ ಸಾಹಿತ್ಯ ಸಹೃದಯರನ್ನು ಒಗ್ಗೂಡಿಸಿ ಸಾಹಿತ್ಯದ ಸವಿ ಉಣ್ಣಿಸುವ ಮೂಲಕ ಯಶಸ್ಸಿನ ಮುನ್ನುಡಿ ಬರೆದಿದೆ. ಹಿಚ್ಕಡದ ಕವಿ ಶಾಂತಾರಾಮ ನಾಯಕ ಅವರ ಸರ್ವಾಧ್ಯಕ್ಷತೆಯಲ್ಲಿ ಕಸಾಪ ಜಿಲ್ಲಾಧ್ಯಕ್ಚ ಬಿ.ಎನ್.ವಾಸರೆ ಅವರ ಸಾರಥ್ಯದ ಸಮ್ಮೇಳನ ಅರ್ಥಪೂರ್ಣತೆ ಪಡೆಯಿತು. ಪವಿತ್ರ ಉಳವಿಕ್ಷೇತ್ರದ ಶರಣರ ನೆಲದಲ್ಲಿ ಸಾಹಿತ್ಯ ಸಾಮರಸ್ಯದೆಡೆಗೆ ಸಾಕ್ಷಿಯಾಯಿತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಸಮ್ಮೇಳನ ಉದ್ಘಾಟಿಸಿ, ಕನ್ನಡ ನಾಡುನುಡಿಯ ಬದ್ದತೆಗೆ ನುಡಿಸೇವಕರು ಕಂಕಣ ಬದ್ದರಾಗಬೇಕು ಎಂದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸಮ್ಮೇಳನದಲ್ಲಿ ಭಾಗವಹಿಸಿ,ಗಡಿ ತಂಟೆಯ ಮೂಲಕ ಬಾಂದವ್