ವೃದ್ಧಾಶ್ರಮದ ಹಣತೆಗಳು
ಬೆಳಕು ನೀಡಿ ಖಾಲಿಯಾದ ಹಣತೆಗಳು ವೃದ್ಧಾಶ್ರಮ ಸೇರಿವೆ ಅಂಚು ಕಿತ್ತು ಹೋದ ಹಣತೆಯೊಳಗೆ ಮಕ್ಕಳಿಗಾಗಿ ಗೇಯ್ದ ಬೆವರಿನ ಪಸೆಯಿದೆ ಸುಟ್ಟುಹೋದ ಬತ್ತಿಯೊಳಗೆ ಕುಡಿಗಳಿಗೆ ಬೆಳಕು ನೀಡಿ ದಹಿಸಿಕೊಂಡ ಕನಸುಗಳ ಕನವರಿಕೆಯಿದೆ ಆವಿಯಾದ ಎಣ್ಣೆಯೊಂದಿಗೆ ಕರುಳಿನ ಸಂಬಂಧಗಳೂ ಮರೆಯಾದ ನೋವಿದೆ ಈಗ ಯಾರದೋ ಬತ್ತಿ ಯಾರೋ ಹಾಕಿದ ಎಣ್ಣೆಗೆ ಉರಿವ ಬೆಳಕಿನ ಕಣ್ಣೊಳಗೆ ಕಾಂತಿಯಿಲ್ಲ ವೃದ್ಧಾಶ್ರಮದ ಹಣತೆಗಳಿಗೆ ದೀಪಾವಳಿಯಿಲ್ಲ. - ಶ್ರೀಧರ್ ಶೇಟ್ ಶಿರಾಲಿ