ಕಬೀರ ಕಂಡಂತೆ...೫೩
ಅಂತರಂಗದ ಪ್ರೀತಿಗಿದೆ ತ್ಯಾಗದ ಹೊಳಪು.. ಪ್ರೇಮ ಪ್ಯಾಲಾ ಜೊ ಪೀಯೆ, ಶೀಶ ದಕ್ಷಿಣಾ ದೇಯ| ಲೋಭ ಶೀಶ ನ ದೇಸಕೆ,ನಾಮ ಪ್ರೇಮಕಾ ಲೋಯ|| ಯಾವುದೇ ರೀತಿಯ ಪರಿಶುದ್ಧ ಪ್ರೀತಿಯಿದ್ದರೂ ಅಲ್ಲಿ ಕಷ್ಟ, ಹೋರಾಟ, ತ್ಯಾಗಗಳು ಇದ್ದೇ ಇರುತ್ತವೆ. ತಂದೆ, ತಾಯಿಯರು ತಮ್ಮ ಮಕ್ಕಳನ್ನು ಏಕೆ ಪ್ರೀತಿಸುತ್ತಾರೆ ಎಂದರೆ ಅವರು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಬೆವರು, ರಕ್ತ ಹರಿಸುತ್ತಾರೆ. ಸಮಾಜ, ದೇಶದ ಮೇಲೆ ಪ್ರೀತಿ ಇರುವ ಸಮಾಜ ಸುಧಾರಕರು, ದೇಶಭಕ್ತರು ತಮ್ಮ ಕುಟುಂಬ ಸ್ವಾಸ್ಥ್ಯ ವನ್ನು ತ್ಯಾಗ ನಾಡಿದ ಅನೇಕ ಉದಾಹರಣೆಗಳಿವೆ. ಇತರ ವ್ಯಕ್ತಿಗಳ ಮೇಲೆ ಪ್ರೇಮಭಾವ ಹೊಂದಿದವರು ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್